ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆಗೆ ನುಗ್ಗಿ ಡ್ರ್ಯಾಗರ್ ತೋರಿಸಿ ಚಿನ್ನದ ಸರ ರಾಬರಿ ಮಾಡಿದ್ದ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್, ಚಿರಾಗ್,ವಿಜಯ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದ ಆಸಾಮಿಗಳು ನಂತರ ಮನೆಯಲ್ಲಿದ್ದ ಮಹಿಳೆಗೆ ಡ್ರ್ಯಾಗರ್ ತೋರಿಸಿ ಬೆದರಿಸಿದ್ದರು 150 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದರು.
ಸೆಪ್ಟಂಬರ್ 20 ರಂದು ನಡೆದಿದ್ದ ಪ್ರಕರಣ ದಾಖಲಾಗಿದ್ದು ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.ಸದ್ಯ ಆರೋಪಿಗಳಿಂದ 75 ಸಾವಿರ ಮೌಲ್ಯದ ಚಿನ್ನದ ಸರ,ಮೂರು ಮೊಬೈಲ್ ಸೀಜ್ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟಿ ಜೈಲಿಗಟ್ಟಿದ ಜ್ಞಾನಭಾರತಿ ಪೊಲೀಸರು.