ಶೋಲ್ಡರ್ ಲೆಸ್ ಡ್ರೆಸ್ʼನಲ್ಲಿ ಮಿಂಚಿದ ʼʼಭರಾಟೆʼʼ ಬೆಡಗಿ ಶ್ರೀಲೀಲಾ..!

ನ್ನಡದ ನಟಿಮಣಿ ಶ್ರೀಲೀಲಾ (Sreeleela) ತೆಲುಗು ನೆಲದಲ್ಲಿ (Tollywood) ಮೋಡಿ ಮಾಡ್ತಿದ್ದಾರೆ. ಸದ್ಯ ಶೋಲ್ಡರ್‌ಲೆಸ್ ಡ್ರೆಸ್ ಫೋಟೋ ಶೇರ್ ಮಾಡುವ ಮೂಲಕ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಶೂಟ್ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ. ಪಿಂಕ್ ಮತ್ತು ಬ್ಲ್ಯಾಕ್ ಮಿಶ್ರಿತ ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಕಿಸ್ ಬೆಡಗಿ ಶ್ರೀಲೀಲಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚೆಂದದ ಡ್ರೆಸ್‌ಗೆ ಸಿಂಪಲ್ ಜ್ಯುವೆಲ್ಲರಿ ಹಾಕಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಗ್ಲ್ಯಾಮರಸ್‌ ಆಗಿ ಪೋಸ್ ಕೊಟ್ಟಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ಸೈಮಾ ಅವಾರ್ಡ್ (Siima 2023) ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಈ ಸಮಾರಂಭದಲ್ಲಿ ಶ್ರೀಲೀಲಾ ಕೂಡ ಭಾಗಿಯಾಗಿದ್ದರು. ತೆಲುಗಿನ ‘ಧಮಾಕಾ’ (Dhamaka) ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ಬೆಸ್ಟ್ ನಟಿ ಎಂದು ಶ್ರೀಲೀಲಾಗೆ ಪ್ರಶಸ್ತಿ ಲಭಿಸಿದೆ. ಕಿಸ್, ಭರಾಟೆ ಸಿನಿಮಾದ ನಟಿ ಶ್ರೀಲೀಲಾಗೆ ತೆಲುಗಿನಲ್ಲಿ ಸಖತ್ ಡಿಮ್ಯಾಂಡ್ ಇದೆ. 9ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿ ನಟಿ ಬುಕ್ ಆಗಿದ್ದಾರೆ. ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ರಾಮ್ ಪೋತಿನೇನಿ, ಮಹೇಶ್ ಬಾಬು, ಸೇರಿದಂತೆ ಟಾಪ್ ಸ್ಟಾರ್‌ಗಳಿಗೆ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Loading

Leave a Reply

Your email address will not be published. Required fields are marked *