ಅಜರ್ ಬೈಜಾನ್ ಮಿಲಿಟರಿ ದಾಳಿಗೆ 25 ಮಂದಿ ಸಾವು – 138 ಜನರಿಗೆ ಗಾಯ

ಬಾಕು: ಅಜರ್ ಬೈಜಾನ್ ಮಿಲಿಟರಿ (Azerbaijani Military) ದಾಳಿಯಿಂದಾಗಿ 25 ಮಂದಿ ದಾರುಣ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯೇಕತಾವಾದಿ ಅರ್ಮೇನಿಯನ್ ಮಾನವ ಹಕ್ಕುಗಳ ಅಧಿಕಾರಿ ಹೇಳಿದ್ದಾರೆ. ಘಟನೆಯಲ್ಲಿ ಸ್ಥಳೀಯ ಇಬ್ಬರು ಸೇರಿದಂತೆ 138 ಜನರು ಗಾಯಗೊಂಡಿದ್ದಾರೆ.ಅರ್ಮೇನಿಯನ್-ನಿಯಂತ್ರಿತ ಕರಾಬಾಖ್ನಲ್ಲಿ ಕಾರ್ಯಾಚರಣೆಗೆ ಅಜರ್ಬೈಜಾನ್ ಸೈನ್ಯ ಕಳುಹಿಸಿದೆ. ಈ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಲಾಗಿದೆ. ನೆರೆಯ ಅರ್ಮೇನಿಯಾದೊಂದಿಗೆ ಯುದ್ಧದ ಬೆದರಿಕೆಯನ್ನು ಹಾಕಲಾಗಿದೆ.

ಕರಾಬಾಖ್ ಅಂತಾರಾಷ್ಟ್ರೀಯವಾಗಿ ಅಜರ್ಬೈಜಾನ್ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಆದರೆ ಅದರ ಭಾಗವನ್ನು ಪ್ರತ್ಯೇಕತಾವಾದಿ ಅರ್ಮೇನಿಯನ್ ಅಧಿಕಾರಿಗಳು ನಿಯಂತ್ರಿಸುತ್ತಿದ್ದಾರೆ. ಈ ಪ್ರದೇಶ ನಮ್ಮ ಪೂರ್ವಜರ ತಾಯ್ನಾಡು ಎಂದು ಹೇಳುತ್ತಿದ್ದಾರೆ.
ಈ ಪ್ರದೇಶವು ಎರಡು ಯುದ್ಧಗಳ ಕೇಂದ್ರವಾಗಿದೆ. ಅಜರ್ಬೈಜಾನ್ ಪಡೆಗಳು ಇದುವರೆಗೆ 60 ಕ್ಕೂ ಹೆಚ್ಚು ಮಿಲಿಟರಿ ಪೋಸ್ಟ್ಗಳನ್ನು ವಶಪಡಿಸಿಕೊಂಡಿದೆ. ಇತರ ಯಂತ್ರಾಂಶಗಳೊಂದಿಗೆ 20 ಮಿಲಿಟರಿ ವಾಹನಗಳನ್ನು ನಾಶಪಡಿಸಿವೆ ಬಾಕು ರಕ್ಷಣಾ ಸಚಿವಾಲಯ ತಿಳಿಸಿದೆ.

Loading

Leave a Reply

Your email address will not be published. Required fields are marked *