ಪತ್ನಿ ಹಸಿನ್ ಜಹಾನ್ ದಾಖಲಿಸಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಮೊಹಮ್ಮದ್ ಶಮಿಗೆ ಜಾಮೀನು ಸಿಕ್ಕಿದೆ. ಶಮಿಯ ಹಿರಿಯ ಸಹೋದರ ಮೊಹಮ್ಮದ್ ಹಸಿಬ್ಗೂ ಇದೇ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಇಂದು ಇಬ್ಬರು ಸಹೋದರರು ಕೆಳ ನ್ಯಾಯಾಲಯದ ಮುಂದೆ ಹಾಜರಾದರು. ಅಲ್ಲಿ ಅವರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದರು.ಕೋರ್ಟ್ ಅಂತಿಮವಾಗಿ ಜಾಮೀನು ನೀಡಿದೆ.
ಮಾರ್ಚ್ 2018 ರಲ್ಲಿ ಭಾರತ ತಂಡದ ವೇಗಿ ಮೊಹಮ್ಮದ್ ಶಮಿಯ ವಿಚ್ಛೇದಿತ ಪತ್ನಿಯಿಂದ ಕೌಟುಂಬಿಕ ಹಿಂಸಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಶಮಿಯ ‘ವಿವಾಹಯೇತರ’ ಸಂಬಂಧಗಳ ವಿರುದ್ಧ ಪ್ರತಿಭಟಿಸಿದ ನಂತರ ಶಮಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.