ಬೆಂಗಳೂರು;– ಮತ್ತೆ ನಟ ಶಿವರಾಜ್ ಕುಮಾರ್ ವಿರುದ್ಧ ಪ್ರಶಾಂತ್ ಸಂಬರಗಿ ಗುಡುಗಿದ್ದಾರೆ. ಕಾವೇರಿಯ ಬಗ್ಗೆ ಧ್ವನಿ ಎತ್ತದ ಕನ್ನಡದ ನಟರ ಬಗ್ಗೆ ಪ್ರಶಾಂತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡಿಗೆ ಅವಮಾನವಾದ್ರೆ ಮುನ್ನುಗ್ಗಿ ಬರುತ್ತಿದ್ದ ಏಕೈಕ ವ್ಯಕ್ತಿ ಡಾ. ರಾಜಕುಮಾರ್ ಎಂಬ ಪೋಸ್ಟ್ ಮಾಡಿದ್ದಾರೆ. ರಾಜಣ್ಣ ಪಂಚೆ ಎತ್ತಿಕೊಂಡು ಬೀದಿಗೆ ಇಳಿಯುತ್ತಿದ್ದರು. ಮಹಾನ್ ನಾಯಕನನ್ನ ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ.
ಚಿತ್ರರಂಗದ ದಿಗ್ಗಜರಿಂದ ಹಾಗೂ ದೊಡ್ಮನೆಯಿಂದ ಯಾವುದೇ ಮಾತಿಲ್ಲ. ಇಳಿ ವಯಸ್ಸಿನಲ್ಲಿ ವಾಟಾಳ್ ಹೋರಾಟ ಮಾಡುವಂತಾಗಿದೆ. ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಕನ್ನಡ ಮಾತು ಸೀಮಿತವಾಗಬಾರದು. ಎಂದು ಶಿವಣ್ಣನ ಫೋಟೋ ಹಾಕಿ ಪ್ರಶಾಂತ್ ಟ್ವೀಟ್ ಮಾಡಿದ್ದಾರೆ. ಈ ಹಿಂದೆಯೂ ಶಿವಣ್ಣನನ್ನ ಸಂಭಾವನೆ ತೆಗೆದುಕೊಂಡು ನಟಿಸುವ ನಟ ಎಂದು ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದರು. ಇದೀಗ ಕಾವೇರಿ ವಿಚಾರವಾಗಿ ಮತ್ತೆ ಗುಡುಗಿದ್ದಾರೆ.