ನಕಲಿ ಆರ್ ಎಸ್ ಎಸ್ ಕಾರ್ಯರ್ತರ ಸೇರಿ ನಾಲ್ವರ ಬಂಧನ

ಬೆಂಗಳೂರು: RSS ಕಾರ್ಯಾಕರ್ತರೆಂದು ಹೇಳಿಕೊಂಡು ವ್ಯಕ್ತಿಯ ಕಿಡ್ನಾಪ್ ಮಾಡಿದ ನಕಲಿ ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ದೂರು ದಾಖಲಾದ ಬಳಿಕ ಕಾರ್ಯಾಚರಣೆ ವೇಳೆ ಬಯಲಾಯ್ತು ದನದ ಮಾಂಸ ಕಳ್ಳತನದ ಅಸಲಿ ಕಹಾನಿ ಇದಾಗಿದ್ದು ಆಡುಗೋಡಿ ಪೊಲೀಸರಿಂದ ನಕಲಿ ಆರ್ ಎಸ್ ಎಸ್ ಕಾರ್ಯರ್ತರ ಸೇರಿ ನಾಲ್ವರ ಬಂಧನ. ಸೆಪ್ಟಂಬರ್ 10ರಂದು ನಡೆದಿದ್ದ ಕಿಡ್ನಾಪ್ ಕಹಾನಿ ಜಾವಿದ್ ಬೇಗ್ ಎಂಬಾತನನ್ನು ವಾಹನ ಸಮೇತ ಕಿಡ್ನಾಪ್ ಮಾಡಿದ್ದ ನಕಲಿ ಕಾರ್ಯಕರ್ತರು ಮೂವರು ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಿಕೊಂಡು ಹೋಗಿದ್ದರು.

ರಾಮನಗರದಿಂದ ತಿಲಕನಗರಕ್ಕೆ ಬರುತಿದ್ದ ಜಾವಿದ್ ದನದ ಮಾಂಸ ಗಾಡಿಯಲ್ಲಿಟ್ಟುಕೊಂಡು ಅಂಗಡಿ ಡೆಲವರಿಗೆಂದು ತರುತಿದ್ದ ಈ ವೇಳೆ ಮೈಕೊ ಸಿಗ್ನಲ್ ಬಳಿ ಅಡ್ಡ ಹಾಕಿದ್ದ ಮೂವರು ಕಿಡ್ನಾಪರ್ಸ್ ತಾವು ಆರ್ ಎಸ್ ಎಸ್ ನವರೆಂದು ಸುಳ್ಳು ಹೇಳಿ ತಡೆದು ವಾಹನ ಸಮೇತ ಜಾವಿದ್ ಕರೆದೊಯ್ದಿದ್ದರು

ಬಳಿಕ ಬಿಟ್ಟು ಕಳುಹಿಸಲು ಒಂದು ಲಕ್ಷ ಹಣಕ್ಕೆ ಡಿಮ್ಯಾಂಡ್ ಕೊನೆಗೆ ಹತ್ತು ಸಾವಿರ ಪಡೆದು ಬಿಟ್ಟು ಕಳುಹಿಸಿದ್ದ ಕಿಡ್ನಾಪರ್ಸ್ ಬಳಿಕ ದನದ ಮಾಂಸ ಸಾಗಿಸುತಿದ್ದ ತನ್ನ ಗಾಡಿ ಕೇಳಿದ್ದ ಜಾವಿದ್ ಸೆಂಟ್ ಜಾನ್ ಸಿಗ್ನಲ್ ಬಳಿ ಬಿಟ್ಟಿರೊದಾಗಿ ಹೇಳಿದ್ದ ಕಿಡ್ನಾಪರ್ಸ್ ಬಳಿಕ ಸಿಗ್ನಲ್ ಬಳಿ ಹೋದಾಗ ಕೇವಲ ಗಾಡಿ ಇತ್ತೆ ಹೊರತು ಅದರಲ್ಲಿದ್ದ ದನದ ಮಾಂಸ ಇರಲಿಲ್ಲ.. ಬಳಿಕ ಈ ಬಗ್ಗೆ ದೂರು ನೀಡಿದ್ದ ಚಾಲಕ ಜಾವಿದ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು..

Loading

Leave a Reply

Your email address will not be published. Required fields are marked *