ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಲು CWMA ಆದೇಶ ವಿಚಾರ ಸಂಬಂಧ ದೆಹಲಿಗೆ ಸಂಸದರ ನಿಯೋಗ ತೆರಳಲು ಏನೂ ಸಮಸ್ಯೆ ಇಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯ ಸರ್ಕಾರ ಈ ಬಗ್ಗೆ ಆಸಕ್ತಿವಹಿಸಬೇಕು. ನನ್ನ ಸಲಹೆ ಇಕ್ಕಟಿಗೆ ಸಿಲುಕಿಸಿದೆ ಎಂದು ಡಿಕೆಶಿ ಹೇಳಿದ್ದಾರೆ. ರಾಜ್ಯ ಸರ್ಕಾರದ ನಡೆ ರೈತರನ್ನು ಇಕ್ಕಟಿಗೆ ಸಿಲುಕಿಸಿದೆ. ಸರ್ಕಾರ ತಾನು ಸಲ್ಲಿಸಿರುವ ಅಫಿಡವಿಟ್ಗೆ ಬದ್ಧರಾಗಿರಬೇಕಲ್ವಾ? ಸರ್ಕಾರದಲ್ಲಿ ಕೆಲಸ ಮಾಡುವವರಿಗೆ ಮಾಹಿತಿ, ಜವಾಬ್ದಾರಿ ಇರಬೇಕು. ಡಿಸಿಎಂ ಡಿಕೆಶಿ ಏನೋ ಮಾತನಾಡಬೇಕು ಅಂತಷ್ಟೇ ಹೇಳಿಕೆ ನೀಡ್ತಾರೆ. ತಮಿಳುನಾಡಿನಂತೆ ವಸ್ತುಸ್ಥಿತಿ ಹೇಳಲು ನಾವು ಯಾವಾಗ ಕಲಿಯುತ್ತೇವೋ, ತಮಿಳುನಾಡಿನ ಡ್ಯಾಮ್ಗಳ ಬಗ್ಗೆ ನಮ್ಮ ವಕೀಲರು ಮಾತನಾಡಲ್ಲವೋ ಎಂದರು.