ಯಾದಗಿರಿ: ಬಿಜೆಪಿ ಸರ್ಕಾರ ಬರುತ್ತೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಸಚಿವ ಶರಣಬಸಪ್ಪ ದರ್ಶನಾಪುರ, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಹಿಂದೆ ಬಿಜೆಪಿಯವರು ಏನು ಮಾಡಿದ್ದರು ಅಂತಾ ಗೊತ್ತಿದೆ. ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡೋದು ಎಷ್ಟು ಸರಿ? ರಾಜ್ಯದಲ್ಲಿ 4 ವರ್ಷ ಬಿಜೆಪಿಯವರು ಕೆಟ್ಟದಾಗಿ ಸರ್ಕಾರ ನಡೆಸಿದರು. ರಾಜ್ಯದ ಜನತೆ ಬಿಜೆಪಿಗೆ 113 ಸ್ಥಾನ ನೀಡಿಲ್ಲ, ಮುಂದೆಯೂ ನೀಡಲ್ಲ. ಜನ ಕಾಂಗ್ರೆಸ್ಗೆ ಸರ್ಕಾರ ನಡೆಸಲು ಅವಕಾಶ ನೀಡಿದ್ದಾರೆ. ಜನರ ಆಶೀರ್ವಾದ ಇರುವ ತನಕ ನಮ್ಮ ಸರ್ಕಾರ ಇರುತ್ತದೆ. ಬಿಜೆಪಿಗೆ ಈವರೆಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ ಎಂದರು.