ಮಂಡ್ಯ: ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹಿನ್ನೆಲೆ ಸಂಜೆ ಸಿಎಂ, ಡಿಸಿಎಂ, ನಾವು ದೆಹಲಿಗೆ ಹೋಗಿ ಪ್ರಧಾನಿಯವರನ್ನ, ಸಚಿವರನ್ನ ಭೇಟಿ ಮಾಡುತ್ತೇವೆ ಎಂದು ಮಂಡ್ಯದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರನ್ನ, ಸಚಿವರನ್ನ ಭೇಟಿ ಮಾಡುತ್ತೇವೆ, ನಾಳೆ ದೆಹಲಿಯಲ್ಲಿ ಸಂಸದರ ಜೊತೆ ಸಭೆ ಮಾಡುತ್ತೇವೆ. ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಸಂಸದರನ್ನ ಕರೆದು ಸಭೆ ಮಾಡುತ್ತೇವೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು. ಸುಪ್ರೀಂ ಕೋರ್ಟ್ ಕೇಸ್ ಫೈಲ್ ಮಾಡಿ ಗಂಭೀರವಾಗಿ ವಾದ ಮಂಡನೆ ಮಾಡುತ್ತೇವೆ. ಈಗಾಗಲೇ ಪ್ರಧಾನಿ ಭೇಟಿಗೆ ಪತ್ರ ಬರೆದಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಒಂದು ವರ್ಷದಿಂದ ಪ್ರಭಾವ ಬೀರಿದೆ. ಚುನಾವಣೆ ಇರುವಾಗ ಹಿನ್ನೆಲೆ ಇದೀಗ ಬಿಸಿ ಮುಟ್ಟಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.