ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ 52.5 ಲಕ್ಷ ರೂ. ಮೊತ್ತದ ನಾಣ್ಯ, ಕೋಟ್ಯಂತರ ರೂ ಮೌಲ್ಯದ ನೋಟುಗಳಿಂದ ಗಣಪತಿಗೆ ವಿಶೇಷ ಅಲಂಕಾರವನ್ನ ಮಾಡಲಾಗಿದೆ. ಇಡೀ ದೇವಾಲಯದ ಆವರಣವನ್ನ 5,10,20 ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು 10, 20, 50, 100, 200, 500 ರೂಪಾಯಿ ನೋಟ್ ಗಳನ್ನ ಬಳಸಿಕೊಂಡು ಹೂವಿನಂತೆ ಮಾಲೆಗಳನ್ನ ಮಾಡಿ ಅಲಂಕಾರ ಮಾಡಿದ್ದಾರೆ.
ಸರಿಸುಮಾರು 2.5 ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳ ಮೂಲಕ ಅಲಂಕಾರ ಮಾಡಿದ್ದು, ಇದಕ್ಕಾಗಿ 150 ಜನ ಒಂದು ತಿಂಗಳಿಂದ ಶ್ರಮಿಸಿದೆ. ಯಾವುದೇ ಸಮಸ್ಯೆಗಳು ಆಗದಂತೆ 25 ಜನ ಸೆಕ್ಯೂರಿಟಿ ಮತ್ತು ಇಡೀ ದೇವಾಲಯದಲ್ಲಿ ಸಿಸಿಟಿವಿ ಆಳವಡಿಸಿದ್ದಾರೆ. ಭಕ್ತಿರಿಗೆ ದೇವರ ದರ್ಶನಕ್ಕೆ ಬ್ಯಾರಿಕೇಟ್ ಹಾಕಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ನಾಣ್ಯಗಳಿಂದಲೇ ಗಣೇಶನ ಫೋಟೋಗಳು, ಭಾರತದ ನಕ್ಷೆ, ಕರ್ನಾಟಕದ ನಕ್ಷೆ, ಚಂದ್ರಯಾನದ ಚಿತ್ರ ಸೇರಿದಂತೆ ಜೈ ಜವಾನ್ ಜೈ ಕಿಸಾನ್ ಚಿತ್ರಗಳನ್ನ ಮಾಡಿದ್ದಾರೆ. ಈ ಅಲಂಕಾರ ನೋಡಿದ ಭಕ್ತರು ಸಹ ತುಂಬಾ ಸಂತೋಷಗೊಂಡಿದ್ದಾರೆ.
ಒಟ್ಟಿನಲ್ಲಿ ನೋಟು ಹಾಗೂ ಕಾಯಿನ್ಸ್‍ಗಳಿಂದ ಅಲಂಕಾರವಾಗಿರೋ ದೇವಾಲದಲ್ಲಿ ಗಣೇಶನ ದರ್ಶನ ಪಡೆಯೋ ಫೀಲೇ ಬೇರೆ. ಇನ್ನೂ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಭಕ್ತರು, ದೇವಾಲಯದ ಟ್ರೆಸ್ಟಿಗಳು, ಮತ್ತು ಸಿನಿ ನಾಯಕರು ದಾನವಾಗಿ ನೀಡಿದ್ದಾರೆ. ಭಕ್ತರ ಡಿಮ್ಯಾಂಡ್ ಇರೋವರೆಗೆ ಈ ಅಲಂಕಾರವನ್ನ ಉಳಿಸಿಕೊಳ್ಳೋ ಯೋಜನೆಯನ್ನ ದೇವಾಲಯದ ಆಡಳಿತ ಮಂಡಳಿ ಮಾಡಿಕೊಂಡಿದೆ.