ಇಂದಿನಿಂದ ಸಂಸತ್ʼನ ವಿಶೇಷ ಅಧಿವೇಶನ: ಯಾವ ಬಿಲ್ ಮಂಡಿಸಲಿದೆ ಸರ್ಕಾರ?

ನವದೆಹಲಿ: ಸೋಮವಾರದಿಂದ 5 ದಿನಗಳ ಕಾಲ ಸಂಸತ್ನ ವಿಶೇಷ ಅಧಿವೇಶನವನ್ನು ಸರ್ಕಾರ ನಡೆಸಲಿದೆ. ಇಂದು ಹಳೆ ಸಂಸತ್ ಭವನದಲ್ಲಿ ಕಲಾಪ ಆರಂಭವಾಗಿ ನಾಳೆ ಹೊಸ ಸಂಸತ್ ಭವನಕ್ಕೆಕಲಾಪ ವರ್ಗಾವಣೆಯಾಗಲಿದೆ. ನಾಳೆಯಿಂದ ಹೊಸ ಸಂಸತ್ ಭವನದ ಕಟ್ಟಡದಲ್ಲಿ ಅಧಿಕೃತ ಕಲಾಪ ಆರಂಭವಾಗಲಿದೆ.
ಸಂಸತ್ ವಿಶೇಷ ಅಧಿವೇಶನ ತೀವ್ರ ಕುತೂಹಲ ಮೂಡಿಸಿದೆ. ಸಂಸತ್ ಅಧಿವೇಶನ ಕರೆಯಲು ಕಾರಣ ಎಣು ಎಂಬ ಪ್ರಶ್ನೆ ಮೂಡಿದ್ದು, ಮೋದಿ ಸರ್ಕಾರ ಅಚ್ಚರಿಯ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮಹಿಳಾ ಮೀಸಲಾತಿ, ಒನ್ ನೇಷನ್ ಒನ್ ಎಲೆಕ್ಷನ್, ಇಂಡಿಯಾ ಹೆಸರು ಬದಲಾವಣೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಲೆಕ್ಕಾಚಾರಗಳನ್ನು ಊಹಿಸಲಾಗುತ್ತಿದೆ. ವಿಶೇಷ ಅಧಿವೇಶದ ಜೊತೆಗೆ ಬಿಲ್ಗಳ ಮಂಡನೆಯ ಸಾಧ್ಯತೆಯೂ ಇದೆ.
ಯಾವ ಬಿಲ್ ಮಂಡಿಸಲಿದೆ ಸರ್ಕಾರ?
1. ವಕೀಲರ (ತಿದ್ದುಪಡಿ) ಮಸೂದೆ, 2023
2. ಪತ್ರಿಕಾ ಮತ್ತು ಆವರ್ತಕ ನೋಂದಣಿ ಮಸೂದೆ, 2023 ( ಇವುಗಳನ್ನು ಲೋಕಸಭೆಯಲ್ಲಿ ಪರಿಚಯಿಸಲಾಗುವುದು ಆಗಸ್ಟ್ 3 ರಂದು ರಾಜ್ಯಸಭೆಯಲ್ಲಿ ಎರಡು ಮಸೂದೆ ಅಂಗೀಕರಿಸಲಾಯಿತು)
3. ಪೋಸ್ಟ್ ಆಫೀಸ್ ಬಿಲ್, 2023
4. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023 ಅನ್ನು ರಾಜ್ಯಸಭೆಯಲ್ಲಿ ಚರ್ಚಿಸಲಾಗುವುದು (ಈ ಎರಡೂ ಮಸೂದೆಗಳನ್ನು ಆಗಸ್ಟ್ 10 ರಂದು ರಾಜ್ಯಸಭೆಯಲ್ಲಿ ಮಂಡಿಸಲಾಯಿತು)
5. ಮೊದಲ ದಿನವಾದ ಇಂದು 75 ವರ್ಷಗಳ ಸಂಸದೀಯ ಪಯಣ – ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಪಾಠಗಳ ಕುರಿತು ಚರ್ಚೆ ನಡೆಯಲಿದೆ. ಇದಲ್ಲದೆ, ಸ್ವಾತಂತ್ರ್ಯದ ಅಮರ ಅವಧಿಯ ಬಗ್ಗೆಯೂ ಚರ್ಚೆ ನಡೆಯಲಿದೆ. ಜೊತೆಗೆ ಚಂದ್ರಯಾನ-3 ಮಿಷನ್ ಮತ್ತು ಜಿ20 ಶೃಂಗಸಭೆಯಲ್ಲಿ ಪ್ರಸ್ತಾಪಗಳನ್ನು ತರಲಾಗುವುದು.
6. ಇವುಗಳ ನಡುವೆ ಸರ್ಕಾರ ಅಚ್ಚರಿಯ ರೀತಿಯಲ್ಲಿ ವಿಶೇಷ ಮಸೂದೆ ಮಂಡಿಸುವ ಸಾಧ್ಯತೆಗಳಿದೆ.

Loading

Leave a Reply

Your email address will not be published. Required fields are marked *