ಭುವನೇಶ್ವರಿ: ಖ್ಯಾತ ಲೇಖಕಿ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ಅವರ ಸಹೋದರಿ ಗೀತಾ ಮೆಹ್ತಾ (80) (Gita Mehta) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ದೆಹಲಿಯಲ್ಲಿರುವ ನಿವಾಸದಲ್ಲಿ ನಿಧನರಾದರು. ಗೀತಾ ಅವರು ಮಗ ಹಾಗೂ ಪತಿ ಸೋನಿ ಮೆಹ್ತಾ ಅವರನ್ನು ಅಗಲಿದ್ದಾರೆ.
ತಂದೆ ಬಿಜು ಪಟ್ನಾಯಕ್ ಮತ್ತು ತಾಯಿ ಜ್ಞಾನ್ ಪಟ್ನಾಯಕ್ ದಂಪತಿಯ ಮಗಳಾಗಿರುವ ಗೀತಾ ಅವರು 1943 ರಲ್ಲಿ ಹುಟ್ಟಿದರು. ಇವರು ಭಾರತದಲ್ಲಿ ಮತ್ತು ಯುನೈಟೆಡ್ ಕಿಂಗ್ಡಮ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಸದ್ಯ ಗೀತಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಮೆಹ್ತಾ ಅವರ ವ್ಯಕ್ತಿತ್ವ ಬಹುಮುಖವಾಗಿದ್ದು, ಬರವಣಿಗೆ ಮತ್ತು ಸಾಕ್ಷ್ಯ ಚಿತ್ರ ನಿರ್ಮಾಣದಲ್ಲಿ ಖ್ಯಾತಿ ಗಳಿಸಿದ್ದರು. ಪ್ರಕೃತಿ ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ಸಾಕಷ್ಟು ಒಲವು ತೋರಿದ್ದರು ಎಂದು ತಿಳಿಸಿದ್ದಾರೆ.