ಬೆಂಗಳೂರು;- ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟಿ ಕೋಟಿ ಹಣ ಪಡೆದು ವಂಚನೆ ಎಸಗಿದ ಆರೋಪದಡಿ ಬಂಧಿತರಾಗಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅಂಡ್ ಟೀಮ್ ನ ಮುಖವಾಡ ಬಗೆದಷ್ಟು ಬಯಲಾಗುತ್ತಿದೆ. ಚೈತ್ರಾ ಕಬಾಬ್ ಗ್ಯಾಂಗ್ ನ ಡೀಲಿಂಗ್ ಆಡಿಯೋ ಬಹಿರಂಗವಾಗಿದ್ದು, ಸುನಿಲ್ ಕುಮಾರ್ ಹೆಸರು ಪ್ರಸ್ತಾಪವಾಗಿದೆ
ಪ್ರಸಾದ ಮತ್ತು ಚೈತ್ರಾ ನಡುವಿನ ಆಡಿಯೋ ಸಂಭಾಷಣೆ ಇದಾಗಿದೆ. ಅಲ್ಲದೆ, ಈ ಸಂಭಾಷಣೆ ವೇಳೆ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಪ್ರಸಾದ್ ಚೈತ್ರಾಗೆ ಪರಿಚಯಿಸಿದ್ದಾನೆ. ಅಷ್ಟು ಮಾತ್ರವಲ್ಲದೆ, ಮಾಜಿ ಸಚಿವ ಸುನಿಲ್ ಕುಮಾರ್ ಹೆಸರು ಕೂಡ ಪ್ರಸ್ತಾಪವಾಗಿದೆ.
ಆಡಿಯೋ ಸಂಭಾಷಣೆ
ಚೈತ್ರಾ: ಹಾ ಪ್ರಸಾದ್
ಪ್ರಸಾದ್: ಮುಗಿಸ್ದೆ
ಚೈತ್ರಾ: ಹೋ ಆಯ್ತಾ?
ಪ್ರಸಾದ್: ಹಾ
ಚೈತ್ರಾ: ಇಷ್ಟು ಬೇಗಾ! 6.22 ಆಗೇ ಹೋಯ್ತಲ್ಲ, ನಂಗೊತ್ತೆ ಇಲ್ಲ, ಬೇಗ ಹೋಗಿದ್ರಾ?
ಪ್ರಸಾದ್: ಬೇಗ ಏನಲ್ಲ ಲೇಟಾಗಿತ್ತು
ಚೈತ್ರಾ: ಹೌದಾ
ಪ್ರಸಾದ್: ಹಾ, ಅಂದ್ರೆ 6 ಗಂಟೆ ಹೇಳಿದ್ರಲ್ಲ, ಆರು ಕಾಲಾಯ್ತು ಈಗ ಜಸ್ಟ್ ಮುಗಿಸ್ದೆ
ಚೈತ್ರಾ: ಹೌದಾ, ಓಕೆ
ಪ್ರಸಾದ್: ಹೌದು
ಚೈತ್ರಾ: ಗಗನ್ಗೆ ಫೋನ್ ಮಾಡಿ ಹೇಳ್ಬೇಕಿತ್ತು
ಪ್ರಸಾದ್: ಗಗನ್ಗೆ ಹೇಳ್ದೆ
ಚೈತ್ರಾ: ಹಂ, ಸರಿ ಸರಿ
ಪ್ರಸಾದ್: ಗಗನ್ಗೆ ಮಾಡಿ ನಿನಗೆ ಮಾಡಿದೆ
ಚೈತ್ರಾ: ಹೌದಾ.. ಸರಿ
ಪ್ರಸಾದ್: ನಾರ್ಮಲ್ ಸಂಘಟನೆ ಇದ್ದ ಹುಡುಗರಿದ್ರು ಅಷ್ಟೆ
ಚೈತ್ರಾ: ಹೌದಾ ಸರಿ
ಪ್ರಸಾದ್: ಹಾಂ
ಚೈತ್ರಾ: ಎಲ್ಲಿದ್ದಿದ್ರು
ಪ್ರಸಾದ್: ಅದು… ಯಾವುದೊ ಕಾರ್ಕಳ ರೋಡಲ್ಲಿ ಒಳಗೆ
ಚೈತ್ರಾ: ಹೌದ, ಸರಿ ಮೋಸ್ಟ್ಲಿ ಸುನೀಲ್ ಕುಮಾರ್ ಮನೆಗೆ ಹೋಗ್ತಾರೆ ಅನಿಸುತ್ತೆ
ಪ್ರಸಾದ್: ಸುನೀಲ್ ಕುಮಾರ್ ಮನೆಗಾ?
ಚೈತ್ರಾ: ಮೇ ಬೀ.. ಇಲ್ಲ ಅಲ್ಲಿ ಯಾಕೆ ಬರ್ತಾರೆ
ಪ್ರಸಾದ್: ಹೌದು.. ಹೌದು
ಚೈತ್ರಾ: ನೋಡುವಾ
ಪ್ರಸಾದ್: ಹೌದಾ.. ಸರಿ ಸರಿ, ಅವರಿಗೊಂದು ಹೇಳಿಬಿಡಿ
ಚೈತ್ರಾ: ಯಾರಿಗೆ?
ಪ್ರಸಾದ್: ನಾನು ಮಾಡಿದ್ದೇನೆ, ನೀವು ಒಂದ್ಸಲ ಫೋನ್ ಮಾಡಿ
ಚೈತ್ರಾ: ಇನ್ನೊಂದ್ ಸಲ ಕಾಲ್ ಮಾಡ್ತೇನೆ
ಪ್ರಸಾದ್: ಸರಿ
ಚೈತ್ರಾ: ಸರಿ.. ಸರಿ
ಇನ್ನೂ ಕೃತ್ಯಕ್ಕೆ ಆಗಾಗ ಲೊಕೇಶನ್ ಬದಲಿಸುತ್ತಿದ್ದ ಹಿನ್ನೆಲೆ ನಿನ್ನೆ ಆರೋಪಿಗಳನ್ನು ಮೂರು ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದ ಸಿಸಿಬಿ ಪೊಲೀಸರು, ಇಂದು ಮತ್ತೆ ಹಲವೆಡೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.