ವಿಶ್ವ ಬ್ಯಾಂಕ್ ಅಧ್ಯಕ್ಷರ ಪಟ್ಟಕ್ಕೆ ಆಯ್ಕೆಯಾದ ಭಾರತ ಮೂಲದ ಅಜಯ್ ಬಂಗಾ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ನಿವಾಸಿ​ ಅಜಯ್​ ಬಂಗಾ ವಿಶ್ವ ಬ್ಯಾಂಕ್​ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಜಯ್ ಬಂಗಾ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದಾರೆ.

ಜೂನ್​ 2 ರಿಂದ ಮುಂದಿನ 5 ವರ್ಷಗಳವರೆಗೆ ಅಜಯ್ ಬಂಗಾ ಅಧ್ಯಕ್ಷರಾಗಿ ಇರಲಿದ್ದಾರೆ.

ಬಂಗಾ ಅವರು ವಿಶ್ವಬ್ಯಾಂಕ್‌ನ 14ನೇ ಅಧ್ಯಕ್ಷರಾಗಲಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾಮನಿರ್ದೇಶನಗೊಂಡ ಡೇವಿಡ್ ಮಾಲ್ಪಾಸ್ ಅವರಿಂದ ಬಂಗಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

1944 ರಲ್ಲಿ ಯುರೋಪ್​ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಅವಕಾಶ ಅಮೆರಿಕಾ ದೇಶಕ್ಕೆ ನೀಡಲಾಗಿದೆ. ಅದರಂತೆ ಅಧ್ಯಕ್ಷ ಜೋ ಬೈಡನ್ ಅವರು ಅಜಯ್​ ಬಂಗಾರನ್ನು ಫೆಬ್ರವರಿಯಲ್ಲಿ ಮುಖ್ಯಸ್ಥರ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದರು.

ಅಜಯ್​ ಬಂಗಾ ಮೂರು ದಶಕಕ್ಕೂ ಅಧಿಕ ಸಮಯದಿಂದ ಜಾಗತಿಕವಾಗಿ ಉದ್ಯೋಗ ಸೃಷ್ಟಿ, ದೊಡ್ಡ ಆರ್ಥಿಕತೆಯಲ್ಲಿ ಹೂಡಿಕೆ ಸೃಷ್ಟಿ ಸೇರಿದಂತೆ ಹಲವಾರು ಬದಲಾವಣೆಗಳ ಮೂಲಕವೇ ಜಾಗತಿಕವಾಗಿ ಖ್ಯಾತರಾಗಿದ್ದಾರೆ. ಹಲವಾರು ಸಂಸ್ಥೆಗಳಿಗೆ ಆರ್ಥಿಕ ಯಶಸ್ಸಿಗೆ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಅಂತಹ ವ್ಯಕ್ತಿಯನ್ನು ವಿಶ್ವ ಬ್ಯಾಂಕ್​​ಗೆ ನಿರ್ದೇಶನ ಮಾಡಲಾಗುವುದು ಎಂದು ಬೈಡನ್ ಬಂಗಾ​ ಹೆಸರು ಸೂಚಿಸುವ ವೇಳೆ ಹೇಳಿದ್ದರು.

“ಅಜಯ್ ಬಂಗಾ ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗಿದ್ದಾರೆ. ಅವರ ಪರಿಣತಿ, ಅನುಭವ ಮತ್ತು ನಾವೀನ್ಯತೆ ಪರಿವರ್ತನೆ ತರಲಿದೆ” ಎಂದು ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೀಗ ಅಧ್ಯಕ್ಷರಾಗಿ ಬ್ಯಾಂಕ್​ ಸಮಿತಿ ಸದಸ್ಯರು ಸೂಚಿಸಿದ ಬಳಿಕ “ಮಂಡಳಿಯು ಬಂಗಾ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದೆ” ಎಂದು ವಿಶ್ವ ಬ್ಯಾಂಕ್ ಹೇಳಿಕೆಯಲ್ಲಿ ಹೇಳಿದೆ.

Loading

Leave a Reply

Your email address will not be published. Required fields are marked *