ಬೆಂಗಳೂರು: ಹಿಂದುತ್ವ ಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಸ್ವಾಮೀಜಿ ಒಬ್ಬರ ಪಾತ್ರದ ಬಗ್ಗೆ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸ್ವಾಮೀಜಿ ಇದ್ದಾರೆ ಅಂದರೆ ಅವರ ಬಗ್ಗೆಯೂ ತನಿಖೆ ಆಗುತ್ತದೆ ಎಂದರು.
ನನಗೆ ಬಂದ ಮಾಹಿತಿ ಪ್ರಕಾರ ಚೈತ್ರಾ ಕುಂದಾಪುರ ಅವರು ಬಿಜೆಪಿಯಲ್ಲಿ ಟಿಕೆಟ್ ಕೊಡಿಸೋದಾಗಿ ಹಣ ಪಡೆದಿದ್ದಾರೆ. 3.5 ಕೋಟಿ ಹಣ ಪಡೆದಿರೋ ಕಂಪ್ಲೆಂಟ್ ಆಗಿದೆ.ಆ ಪ್ರಕರಣದಲ್ಲಿ ದೂರಿನ ಆಧಾರದಲ್ಲಿ ವಿಚಾರಣೆ ನಡೆಯುತ್ತಿದೆ ಎಂದರು.ಈ ಪ್ರಕರಣದ ಉಳಿದ ವಿಚಾರ ತನಿಖೆ ಬಳಿಕ ಗೊತ್ತಾಗಲಿದೆ. ಆರೋಪಿಯ ಹೇಳಿಕೆ ಪಡೆದುಕೊಂಡು ಬಂಧನ ಆಗಿದೆ. ಇವರ ಜೊತೆಗೆ ಆರೋಪ ಕೇಳಿಬಂದಿರುವ ಸ್ವಾಮೀಜಿಯ ತಪ್ಪಿದ್ರೆ ಅವರ ಬಂಧನ ಕೂಡ ಆಗಲಿದೆ ಎಂದರು.