ಉಕ್ರೇನ್ ಮೇಲೆ ರಷ್ಯಾ ಸೇನೆ ವೈಮಾನಿಕ ದಾಳಿ: 21 ಮಂದಿ ಸಾವು

ಷ್ಯಾ(Russia) ಮತ್ತು ಉಕ್ರೇನ್(Ukraine) ನಡುವಿನ ಯುದ್ಧ ಮತ್ತೊಂದು ಅಪಾಯಕಾರಿ ಹಂತಕ್ಕೆ ತಲುಪಿದೆ. ಉಕ್ರೇನ್ -ಹಾಗೂ ರಷ್ಯಾ ಪರಸ್ಪರ ದಾಳಿ ನಡೆಸಿದೆ. ರಷ್ಯಾ ಅಧ್ಯಕ್ಷ ವಾಸವಿದ್ದ ಕಟ್ಟಡದ ಮೇಲೆ ದಾಳಿ ನಡೆದಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಉಕ್ರೇನ್ ಸಂಚು ರೂಪಿಸಿದೆ ಎಂದು ರಷ್ಯಾ ಆರೋಪಿಸಿದೆ.

ಇತ್ತೀಚಿಗೆ ಮಾಸ್ಕೋದಲ್ಲಿರೋ ಕ್ರೆಮ್ಲಿನ್​​​​​ ಕಟ್ಟಡದ ಮೇಲೆ ಉಕ್ರೇನ್ 2 ಡ್ರೋನ್‌ಗಳನ್ನು ಉಡಾಯಿಸಿತ್ತು. 2 ಡ್ರೋನ್​​​​ಗಳನ್ನ ರಷ್ಯಾ ಹೊಡೆದುರುಳಿಸಿದೆ.

ದಾಳಿಯಿಂದ ಪುಟಿನ್​ಗೆ ಯಾವುದೇ ಅಪಾಯಗಳಾಗಿಲ್ಲ. ಜೊತೆಗೆ ಕ್ರೆಮ್ಲಿನ್ ಕಟ್ಟಡಕ್ಕೂ ಗಂಭೀರ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಇತ್ತ ಉಕ್ರೇನ್​ ಮೇಲೆ ರಷ್ಯಾ ಸೇನೆ ವೈಮಾನಿಕ ದಾಳಿ ನಡೆಸಿದ್ದು, 21 ಮಂದಿ ಮೃತಪಟ್ಟಿದ್ದು, 48 ಜನರಿಗೆ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಖೇರ್ಸನ್ ನಗರದ ವಸತಿ ಪ್ರದೇಶದಲ್ಲಿ ಕ್ಷಿಪಣಿ ದಾಳಿ ನಡೆಸಿದೆ ರಷ್ಯಾ ಸೇನೆ ವಿರುದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆರೋಪ ಮಾಡಿದ್ದಾರೆ.

ಡ್ರೋನ್ ದಾಳಿಯನ್ನು ಯೋಜಿತ ಭಯೋತ್ಪಾದನಾ ಕೃತ್ಯ ಎಂದು ರಷ್ಯಾ ಕಿಡಿಕಾರಿದೆ. ಅಲ್ಲದೆ ರಷ್ಯಾ ಫೆಡರೇಷನ್‌ನ ಅಧ್ಯಕ್ಷರ ಜೀವಕ್ಕೆ ಹಾನಿ ಮಾಡುವ ಪ್ರಯತ್ನ ಎಂದು ಪರಿಗಣಿಸಿರುವುದಾಗಿ ರಷ್ಯಾ ಹೇಳಿದೆ. ರಷ್ಯಾ ಅಧ್ಯಕ್ಷ ಪುಟಿನ್ ಮನೆಯ ಮೇಲೆ ಶಸ್ತ್ರಾಸ್ತ್ರ ತುಂಬಿದ 2 ಡ್ರೋನ್‌ಗಳು ದಾಳಿ ಮಾಡಿದ್ದೇ ತಡ, ಜಗತ್ತಿಗೆ ಈ ಸುದ್ದಿ ಮಿಂಚಿನ ವೇಗದಲ್ಲಿ ತಲುಪಿದೆ. ಮತ್ತೊಂದ್ಕಡೆ ಪುಟಿನ್ ಮನೆ ಮೇಲೆ ದಾಳಿ ನಡೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ ಪುಟಿನ್ ಜೀವ ಉಳಿಸಲು ಕ್ರೆಮ್ಲಿನ್ ಮನೆಯಿಂದ 32 ಕಿ.ಮೀ. ದೂರದ ಬಂಕರ್‌ಗೆ ಪುಟಿನ್ ಅವರನ್ನು ಸ್ಥಳಾಂತರಿಸಲಾಗಿದೆ.

ಉಕ್ರೇನ್ ನಡೆಸಿದೆ ಎನ್ನಲಾದ ಡ್ರೋನ್ ದಾಳಿ ಬಗ್ಗೆ ರಷ್ಯಾ ಖಾರವಾಗಿ ಪ್ರತಿಕ್ರಿಯೆ ನೀಡಿದೆ. ರಷ್ಯಾವು ಯಾವಾಗ ಮತ್ತು ಎಲ್ಲಿ ಸೂಕ್ತ ಎನಿಸುತ್ತದೆಯೋ ಆಗ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕುಗಳನ್ನು ಹೊಂದಿದೆ. ಎರಡು ಮಾನವರಹಿತ ಡ್ರೋನ್​​​ಗಳು ಕ್ರೆಮ್ಲಿನ್ ಕಡೆ ಧಾವಿಸುತ್ತಿದ್ದವು. ಎರಡನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ ಎಂದು ರಷ್ಯಾ ಹೇಳಿಕೆ ನೀಡಿದೆ.

Loading

Leave a Reply

Your email address will not be published. Required fields are marked *