8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ‘ಕತಾರ್ ಕೋರ್ಟ್’ನಿಂದ ಗಲ್ಲು ಶಿಕ್ಷೆ..!

ಕತಾರ್: ಕಳೆದ ವರ್ಷ ಬಂಧಿಸಲಾಗಿದ್ದ 8 ಭಾರತೀಯ ಪ್ರಜೆಗಳಿಗೆ ಕತಾರ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಕತಾರ್ ನ್ಯಾಯಾಲಯದ ಈ ತೀರ್ಪಿಗೆ ಭಾರತೀಯ ವಿದೇಶಾಂಗ ಇಲಾಖೆ ಆಘಾತ ವ್ಯಕ್ತಪಡಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಭಾರತೀಯ ವಿದೇಶಾಂಗ ಇಲಾಖೆ, ಕತಾರ್ ನ್ಯಾಯಾಲಯದ ತೀರ್ಪು ಆಘಾತ ತಂದಿದೆ ಎಂದು ಹೇಳಿದ್ದಾರೆ. ಕತಾರ್ ಜೈಲಿನಲ್ಲಿ ಇರುವ ಭಾರತೀಯರ ರಕ್ಷಣೆಗೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನೂ ನೀಡಿದ್ದು, ಈ ಸಂಬಂಧ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದೆ.

ಕತಾರ್ ನ್ಯಾಯಾಲಯ 8 ಭಾರತೀಯರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವ ತೀರ್ಪಿನ ಪೂರ್ಣ ಪ್ರತಿಗಾಗಿ ಇದೀಗ ಭಾರತೀಯ ವಿದೇಶಾಂಗ ಇಲಾಖೆ ಎದುರು ನೋಡುತ್ತಿದೆ. ತೀರ್ಪಿನ ಪ್ರತಿಯನ್ನು ಪರಮಾರ್ಶೆ ನಡೆಸಿ ಕಾನೂನಾತ್ಮಕ ಆಯ್ಕೆಗಳನ್ನು ಹುಡುಕಾಟ ನಡೆಸಲು ತಜ್ಞರು ತೀರ್ಮಾನಿಸಿದ್ದಾರೆ. ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ 8 ಭಾರತೀಯರ ಕುಟುಂಬಸ್ಥರು ಭಾರತದಲ್ಲಿ ಇದ್ದು, ಅವರ ಜೊತೆಗೂ ಭಾರತೀಯ ವಿದೇಶಾಂಗ ಇಲಾಖೆ ಸಂಪರ್ಕದಲ್ಲಿದೆ. ಜೊತೆಯಲ್ಲೇ ಕತಾರ್ ದೇಶದಲ್ಲಿ ಇರುವ ಕಾನೂನು ತಜ್ಞರ ಜೊತೆಗೂ ನಿರಂತರ ಸಂಪರ್ಕದಲ್ಲಿ ಇದೆ. ಭಾರತೀಯ ಪ್ರಜೆಗಳ ರಕ್ಷಣೆಗೆ ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳೋದಾಗಿ ವಿದೇಶಾಂಗ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಆಗಸ್ಟ್ 30 ರಿಂದ ಭಾರತೀಯ ನೌಕಾ ದಳದ 8 ನಿವೃತ್ತ ಅಧಿಕಾರಿಗಳು ಕತಾರ್ ದೇಶದ ಜೈಲಿನಲ್ಲಿ ಇದ್ದಾರೆ. ಆದರೆ ಇವರು ಏಕೆ ಜೈಲಿನಲ್ಲಿ ಇದ್ದಾರೆ? ಇವರ ಮೇಲೆ ಇರುವ ಆರೋಪಗಳು ಏನು ಅನ್ನೋದ್ರ ಬಗ್ಗೆ ಭಾರತ ಸರ್ಕಾರ ಈವರೆಗೂ ಏನನ್ನೂ ಹೇಳಿಲ್ಲ. ಜೊತೆಗೆ ಕತಾರ್ ನ್ಯಾಯಾಲಯ ಕೂಡಾ ತನ್ನ ತೀರ್ಪಿನಲ್ಲಿ ಈ ಕುರಿತು ವಿವರಿಸಿಲ್ಲ. ವಿದೇಶಾಂಗ ಇಲಾಖೆ ಪ್ರಕಟಣೆ ಪ್ರಕಾರ ಕತಾರ್‌ನ ಅಲ್ ದಹ್ರಾ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 8 ಭಾರತೀಯರನ್ನು ಬಂಧಿಸಲಾಗಿತ್ತು.

ಇದೀಗ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನಿಂದ ಆಘಾತವಾಗಿದೆ ಎಂದಷ್ಟೇ ಹೇಳಿದೆ. ಜೊತೆಯಲ್ಲೇ ಭಾರತೀಯ ಪ್ರಜೆಗಳ ರಕ್ಷಣೆಗೆ ಕಾನೂನಾತ್ಮಕವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳೋದಾಗಿ ತಿಳಿಸಿದೆ. ಇವರೆಲ್ಲರೂ ಕತಾರ್‌ನ ಖಾಸಗಿ ಕಂಪನಿಯ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ವಿದೇಶಾಂಗ ಇಲಾಖೆ ಹೇಳಿದೆ.

Loading

Leave a Reply

Your email address will not be published. Required fields are marked *