ಆನ್ ಲೈನ್ ಜೂಜಾಟದಲ್ಲಿ ಬರೋಬ್ಬರಿ 58 ಕೋಟಿ ರೂ. ಕಳೆದುಕೊಂಡ ಉದ್ಯಮಿ..!

ಮುಂಬೈ: ಉದ್ಯಮಿಯೊಬ್ಬರು ಆನ್ಲೈನ್ ಜೂಜಾಟದಲ್ಲಿ 5 ಕೋಟಿ ಗೆದ್ದು, ಬರೋಬ್ಬರಿ 58 ಕೋಟಿ ರೂ. ಕಳೆದುಕೊಂಡ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಉದ್ಯಮಿಗೆ ಪರಿಚಯವಾದ ಜೈನ್ ಆನ್ಲೈನ್ ಜೂಜಾಟದಿಂದ ಹಣ ಗಳಿಸಬಹುದೆಂದು ಪ್ರೇರೇಪಿಸಿದ್ದಾರೆ. ಆರಂಭದಲ್ಲಿ ನಿರಾಕರಿಸಿದ ಉದ್ಯಮಿ ಅಂತಿಮವಾಗಿ ಜೈನ್ ಮನವೊಲಿಕೆಗೆ ಒಪ್ಪಿಕೊಂಡರು. ಅಲ್ಲದೆ ಹವಾಲಾ ವ್ಯಾಪಾರಿಯ ಮೂಲಕ 8 ಲಕ್ಷವನ್ನು ವರ್ಗಾಯಿಸಿದ್ದಾರೆ ಎಂದು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದರು.
ಈ ಆಟವಾಡುತ್ತಾ ಉದ್ಯಮಿ ಬರೋಬ್ಬರಿ 58 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ. ಆದರೆ ಯಾವುದೇ ಹಣ ಬಂದಿಲ್ಲ. ಈ ವೇಳೆ ಈತನಿಗೆ ಕೇವಲ 5 ಕೋಟಿ ರೂ. ಮಾತ್ರ ಲಾಭದ ರೀತಿಯಲ್ಲಿ ಗೇಮ್ ಮೂಲಕ ವಾಪಸ್ ಬಂದಿದೆ. ಇದರಿಂದ ಅನುಮಾನಗೊಂಡ ಉದ್ಯಮಿ ಹಣ ವಾಪಸ್ ನೀಡುವಂತೆ ಆರೋಪಿಗೆ ಕೇಳಿದ್ರೆ ಇದಕ್ಕೆ ಆತ ಒಪ್ಪಲಿಲ್ಲ. ಹೀಗಾಗಿ ಹಣ ಕಳೆದುಕೊಂಡ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಾಗ್ಪುರದ ಉದ್ಯಮಿಯೊಬ್ಬರು ಆನ್ಲೈನ್ ಜೂಜಾಟದಲ್ಲಿ 58 ಕೋಟಿ ಕಳೆದುಕೊಂಡರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಶಂಕಿತ ವ್ಯಕ್ತಿಯೊಬ್ಬನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ 14 ಕೋಟಿ ರೂಪಾಯಿ ನಗದು, 4 ಕೆಜಿ ಚಿನ್ನ ಪತ್ತೆಯಾಗಿದ್ದು, ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಎಂದು ಗುರುತಿಸಲಾಗಿದೆ. ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾ ಸಿಟಿಯಲ್ಲಿರುವ ಈತನ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಇದಕ್ಕೂ ಮುನ್ನವೇ ಜೈನ್ ದುಬೈಗೆ ಹಾರಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ಜೈನ್ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ 14 ಕೋಟಿ ರೂಪಾಯಿ ನಗದು, 4 ಕೆ.ಜಿ ಬಂಗಾರ ಪತ್ತೆಯಾಗಿದೆ. ಹಣ, ಚಿನ್ನ ಸಿಗುತ್ತಿದ್ದಂತೆ ಆರೋಪಿಯು ದುಬೈಗೆ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.

Loading

Leave a Reply

Your email address will not be published. Required fields are marked *