ಮೈಸೂರು: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ (ಮೇ.10) ರಂದು ಮತದಾನ ನಡೆಯುತ್ತದೆ. ಜಿಲ್ಲೆಯಲ್ಲಿ ಒಟ್ಟು 26 ಲಕ್ಷ ಮತದಾರರಿದ್ದಾರೆ. ಒಟ್ಟು 2905 ಮತಗಟ್ಟೆ, 574 ಅತಿ ಸೂಕ್ಷ್ಮ ಮತಗಟ್ಟೆ, 52 ಮತಗಟ್ಟೆಗಳು ವರುಣಾ ವ್ಯಾಪ್ತಿಯಲ್ಲಿ. 1,597 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲಾಗುತ್ತದೆ. 143 ಅಧಿಕೃತ ಅಭ್ಯರ್ಥಿಗಳಿದ್ದಾರೆ. ಮನೆಯ ಬಳಿ ಹಣ, ಉಡುಗೊರೆ ಹಂಚಲು ಬಂದವರ ವೀಡಿಯೋ ಮಾಡಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಇದುವರೆಗೂ 3 ಕೋಟಿ 2 ಲಕ್ಷದ 32 ಸಾವಿರ ಹಣ ಜಪ್ತಿ ಮಾಡಲಾಗಿದೆ. 8 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆ ಅಡಿ 40 ದೂರು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಎಸ್ಪಿ ಸೀಮಾ ಹೇಳಿದ್ದಾರೆ.