ನವದೆಹಲಿ: ಯುದ್ಧಪೀಡಿತ ಇಸ್ರೇಲ್ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆಸಿಕೊಳ್ಳುವ ಆಪರೇಷನ್ ಅಜಯ್ (Operation Ajay) ಕಾರ್ಯಾಚರಣೆ ಮುಂದುವರಿದಿದ್ದು, ಇಂದು 235 ಮಂದಿ ಪ್ರಯಾಣಿಕರು ವಾಪಸ್ಸಾಗಿದ್ದಾರೆ. ಹೌದು. ಆಪರೇಷನ್ ಅಜಯ್ ಕಾರ್ಯಚರಣೆಯ ಮೂಲಕ ಇಸ್ರೇಲ್ ನಿಂದ (Isreal) ಎರಡನೇ ವಿಮಾನ ಇಂದು ಭಾರತಕ್ಕೆ ಬಂದಿಳಿದಿದೆ.
ಎರಡನೇ ವಿಮಾನದಲ್ಲಿ 235 ಮಂದಿ ಪ್ರಯಾಣಿಕರು ಆಗಮಿಸಿದ್ದು, ಇದರಲ್ಲಿ ಒಂಬತ್ತು ಮಂದಿ ಕನ್ನಡಿಗರು (ಮೈಸೂರು ಐವರು, ಬೆಂಗಳೂರಿನ ಬಸವನಗುಡಿಯ ನಾಲ್ಕು ಮಂದಿ ನಿವಾಸಿಗಳು) ದೆಹಲಿಗೆ ಬಂದಿಳಿಯುವ ಮೂಲಕ ನಿಟ್ಟುಸಿರುಬಿಟ್ಟಿದ್ದಾರೆ. ದೆಹಲಿಗೆ ಆಗಮಿಸಿದ ಪ್ರಯಾಣಿಕರನ್ನು ಕೇಂದ್ರ ಸಚಿವ ರಾಜಕುಮಾರ ರಾಜನ್ ಸಿಂಗ್ ಸ್ವಾಗತಿಸಿದ್ದಾರೆ.
ಶುಕ್ರವಾರ ಭಾರತೀಯರನ್ನು ಹೊತ್ತ ಮೊದಲ ವಿಮಾನ ಇಸ್ರೇಲ್ನಿಂದ ದಹೆಲಿಗೆ ಬಂದಿಳಿದಿತ್ತು. ಒಟ್ಟು 230 ಮಂದಿ ಭಾರತೀಯರು ತವರಿಗೆ ಮರಳಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಸ್ವಾಗತಿಸಿದ್ದರು. 230 ಮಂದಿಯಲ್ಲಿ ಐವರು ಕನ್ನಡಿಗರು ಸಹ ಇದ್ದು, ಅವರನ್ನ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಇದೇ ವೇಳೆ ದೆಹಲಿಯಿಂದ ಕರ್ನಾಟಕಕ್ಕೆ ತೆರಳಲು ಸಾರಿಗೆ ವೆಚ್ಚದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು.