ಬಾಲಿವುಡ್ ಬ್ಯೂಟಿ ನಟಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಅವರನ್ನು ಮದುವೆಯಾದ ಬಳಿಕ ವಿದೇಶದಲ್ಲಿಯೇ ಸೆಟಲ್ ಆಗಿದ್ದಾರೆ. ಬಾಲಿವುಡ್ ನಿಂದ ಹಾಲಿವುಡ್ ಚಿತ್ರರಂಗಕ್ಕೆ ಹಾರಿರುವ ಪಿಗ್ಗಿ ಸದ್ಯ ಅಲ್ಲಿಯೇ ಸೆಟಲ್ ಆಗಿದ್ದಾರೆ. ಈ ನಡುವೆ ಪತಿಯೊಂದಿಗೆ ಮೆಟಾ ಗಾಲಾ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದು ಈ ವೇಳೆ ಪಿಗ್ಗಿ ಧರಿಸಿದ್ದ ದುಬಾರಿ ಮೊತ್ತದ ನೆಕ್ಲೇಸ್ ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ಇತ್ತೀಚಿಗೆ ಅಮೆರಿಕದ ಮೊಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಮೆಟಾ ಗಾಲಾ 2023 ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು.ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಕಪ್ಪು ಬಣ್ಣದ ಗೌನ್‌ನಲ್ಲಿ ಹೆಜ್ಜೆ ಹಾಕಿದ್ದರು. ಕಪ್ಪು ಬಣ್ಣದ ಗೌನ್ ಗೆ ಮ್ಯಾಚ್ ಆಗುವಂತೆ ಡೈಮೆಂಟ್ ನೆಕ್ಲೇಸ್ ಧರಿಸಿದ್ದು ಎಲ್ಲರ ಕಣ್ಣು ಮಿಗ್ಗಿಯ ಡೈಮಂಡ್ ನೆಕ್ಲೇಸ್ ಮೇಲೆ ಬೀಳುವಂತೆ ಮಾಡಿದೆ. ಮೂಲಗಳ ಪ್ರಕಾರ, ಪ್ರಿಯಾಂಕಾ ಧರಿಸಿರುವ ಡೈಮೆಂಟ್ ನೆಕ್ಲೇಸ್ ಬೆಲೆ 25 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿ ಪ್ರಕಾರ 204 ಕೋಟಿ ರೂಪಾಯಿಯಾಗಿದೆ.