ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಒಟ್ಟು ನಿಫಾ ವೈರಸ್ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಕೋಯಿಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ 24 ವರ್ಷದ ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ ವೈರಸ್ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಸದ್ಯ 706 ಜನ ಸಂಪರ್ಕ ಪಟ್ಟಿಯಲ್ಲಿದ್ದಾರೆ. ಅದರಲ್ಲಿ 77 ಮಂದಿ ಹೈ-ರಿಸ್ಕ್ನಲ್ಲಿದ್ದಾರೆ ಮತ್ತು 153 ಕಾರ್ಯಕರ್ತರು ಆರೋಗ್ಯವಾಗಿದ್ದಾರೆ. ಹೈ-ರಿಸ್ಕ್ ವರ್ಗದಲ್ಲಿರುವವರಿಗೆ ಪ್ರಸ್ತುತ ಯಾವುದೇ ರೋಗಲಕ್ಷಣಗಳು ಕಾಣಿಸುತ್ತಿಲ್ಲ ಎಂದಿದ್ದಾರೆ.
ಪ್ರಸ್ತುತ 13 ಜನರು ಆಸ್ಪತ್ರೆಯ ನಿಗಾದಲ್ಲಿದ್ದು, ತಲೆ ನೋವಿನಂತಹ ಸಣ್ಣಪುಟ್ಟ ಲಕ್ಷಣಗಳು ಕಾಣಿಸುತ್ತಿವೆ. ಹೈ-ರಿಸ್ಕ್ ವರ್ಗದಲ್ಲಿರುವವರು ತಮ್ಮ ಮನೆಯೊಳಗಿರಬೇಕು ಎಂದು ಸರ್ಕಾರ ಸಲಹೆ ನೀಡಿದೆ. ಈ ಕುರಿತು ಎಲ್ಲಾ ಕ್ರಮಗಳನ್ನು ಸಮನ್ವಯಗೊಳಿಸಲು ಕೇರಳ ಸರ್ಕಾರವು 19 ಕೋರ್ ಕಮಿಟಿಗಳನ್ನು ರಚಿಸಿದೆ. ಐಸೋಲೇಷನ್ನಲ್ಲಿ ಇರುವವರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಸ್ಥಳೀಯ ಸ್ವಯಂಸೇವಕ ತಂಡಗಳನ್ನು ರಚಿಸಲಾಗಿದೆ