ಬೆಳಗಾವಿ: ಭ್ರೂಣ ಹತ್ಯೆ ಪ್ರಕರಣದ ತನಿಖೆಗೆ ಎಸ್ ಐಟಿ ತನಿಖೆಗೆ ನೀಡಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಈಗಾಗಲೇ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿದೆ. ಆದರೆ ಸಿಐಡಿಗಿಂತ ಎಸ್ ಐ ಟಿ ಗೆ ನೀಡಿ. ಅಲ್ಲದೆ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸದನದಲ್ಲಿ ಭ್ರೂಣ ಹತ್ಯೆ ವಿಚಾರ ಪ್ರಸ್ತಾಪಿಸಿದ ಅವರು, ಇಷ್ಟೆಲ್ಲಾ ಚರ್ಚೆಯಾದರೂ ಹೊಸಕೋಟೆಯಲ್ಲಿ 16 ವಾರಗಳ ಭ್ರೂಣ ಹತ್ಯೆ ಮಾಡಲಾಗಿದೆ.
ಕಾನೂನಿಗೆ ಎಷ್ಟು ಗೌರವ ಕೊಡ್ತಾರೆ? ಎಷ್ಟು ಬಲಾಢ್ಯರಿದ್ದಾರೆ? ಎಂದು ಅರ್ಥ ಆಗುತ್ತದೆ ಎಂದರು. 27 ವರ್ಷಗಳಲ್ಲಿ ಆರೋಗ್ಯ ಇಲಾಖೆ ಕೇವಲ 87 ಪ್ರಕರಣ ದಾಖಲಾಗಿದೆ. ಒಬ್ಬೊಬ್ಬ ವೈದ್ಯರು 300 ಭ್ರೂಣ ಹತ್ಯೆ ಮಾಡಿದ್ದಾರೆ. ಇದೊಂದು ರೀತಿಯಲ್ಲಿ ಕೊಲೆ, ಗಂಡು ಮಗ ಬೇಕು ಎಂಬುದು ಇದಕ್ಕೆ ಕಾರಣ. ವರದಕ್ಷಿಣೆ ಕೂಡಾ ಇದಕ್ಕೆ ಕಾರಣವಾಗ್ತಿದೆ ಎಂದು ಹೇಳಿದರು.