ಹಾವೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆ ಮಸ್ಟರಿಂಗ ಕಾರ್ಯ ಭರದಿಂದ ಸಾಗಿದೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು 1471 ಮತಗಟ್ಟೆಗಳಿದ್ದು, 6476 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 13,02,683 ಒಟ್ಟು ಮತದಾರರಿದ್ದಾರೆ. ಪುರುಷ ಮತದಾರರು 6,65,617, ಮಹಿಳಾ ಮತದಾರರು 6,37,019, ಇತರೆ 47 ಜನ ಮತದಾರರಿದ್ದಾರೆ. ಚುನಾವಣೆ ಕಾರ್ಯಕ್ಕಾಗಿ ಒಟ್ಟು 223 ಬಸ್ 29 ಜೀಪ್, 22ಮ್ಯಾಕ್ಸಿ ಕ್ಯಾಬ್ ಬಳಕೆ ಮಾಡಿಕೊಳ್ಳಲಾಗಿದೆ.