ಬೆಂಗಳೂರು: ಇಂದಿನಿಂದ ಹೋಟೆಲ್ ತಿಂಡಿ, ಆಹಾರದ ಮೇಲೆ ಶೇ.10ರಷ್ಟು ದರ ಏರಿಕೆಯಾಗಲಿದೆ. ಹಾಲು, ವಿದ್ಯುತ್, ಅಗತ್ಯ ವಸ್ತುಗಳ ದರ ಏರಿಕೆ ಹಿನ್ನೆಲೆ ಹೋಟೆಲ್ ತಿಂಡಿ, ಊಟ, ಟೀ, ಕಾಫಿ, ಆಹಾರಗಳ ದರ ಏರಿಕೆ ಮಾಡಲಾಗುತ್ತಿದೆ. ಇಂದಿನಿಂದ ಹೋಟೆಲ್ ಆಹಾರದ ಪರಿಷ್ಕೃತ ದರ ಜಾರಿಯಾಗಲಿದೆ. ಮೊದಲು ಕೆಜಿ ಬೆಣ್ಣೆ ರೇಟ್ 550 ಇತ್ತು. ಇದೀಗ ಹಾಲಿನ ದರದ ಏರಿಕೆಯಿಂದ ಬೆಣ್ಣೆ ರೇಟ್ ಕೆಜಿಗೆ 700 ರೂಪಾಯಿಯಾಗಿದೆ. ದೋಸೆಗೆ ಬೇಕಾದ ಬೆಣ್ಣೆ, ಚಟ್ನಿಗೆ ಬೇಕಾದ ಹಸಿ ಮೆಣಸಿನಕಾಯಿ ದುಬಾರಿಯಾದ ಹಿನ್ನಲೆ, ಹೋಟೆಲ್ ಮಾಲೀಕರು ಒಂದು ಪ್ಲೇಟ್ ದೋಸೆಗೆ 20 ರೂಪಾಯಿ ಏರಿಕೆ ಮಾಡಿದ್ದಾರೆ.
ಇಂದಿನಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 3 ರೂ. ಹೆಚ್ಚಳವಾಗಲಿದೆ. ಟೋನ್ಡ್ ಹಾಲಿನ ಹಿಂದಿನ ದರ 39 ರೂ., ಪರಿಷ್ಕೃತ ದರ 42 ರೂ. ಆಗಲಿದೆ. ಹೋಮೋಜಿನೈಸ್ಡ್ ಹಾಲಿನ ಹಿಂದಿನ ದರ 40 ರೂ., ಪರಿಷ್ಕೃತ ದರ 43 ರೂ. ಹಸುವಿನ ಹಾಲು(ಹಸಿರು ಪೊಟ್ಟಣ) ಹಿಂದಿನ ದರ 43, ಪರಿಷ್ಕೃತ ದರ 46 ರೂ. ಶುಭಂ ಹಾಲಿನ ಹಿಂದಿನ ದರ 45 ರೂಪಾಯಿ, ಪರಿಷ್ಕೃತ ದರ 48 ರೂ. ಮೊಸರು ಪ್ರತಿ ಲೀಟರ್ಗೆ ಹಿಂದಿನ ದರ 47 ರೂ., ಪರಿಷ್ಕೃತ ದರ 50 ರೂ. ಮಜ್ಜಿಗೆ 200ml ಹಿಂದಿನ ದರ 8 ರೂಪಾಯಿ, ಪರಿಷ್ಕೃತ ದರ 9 ರೂ. ಆಗಲಿದೆ.