ಗೃಹಜ್ಯೋತಿಯಡಿ 1.42 ಕೋಟಿ ಕುಟುಂಬಗಳಿಗೆ ಅನುಕೂಲ ಆಗಿದೆ: ಸಚಿವ ಜಮೀರ್ ಅಹಮದ್

ಬೆಂಗಳೂರು: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಜನರ ಬಳಿ ಮತ ಕೇಳುತ್ತದೆ. ಬಿಜೆಪಿ ದ್ವೇಷದ ಭಾವನೆ ಮೂಡಿಸಿ ಮತ ಕೇಳುತ್ತದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು. ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ್ದು ಅಭಿವೃದ್ಧಿ ಮಂತ್ರ, ಬಿಜೆಪಿ ಅವರದು ದ್ವೇಷದ ತಂತ್ರ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಪೈಕಿ ನಾಲ್ಕು ಈಡೇರಿಸಿದೆ. ಗೃಹಲಕ್ಷ್ಮಿ 1.28 ಕೋಟಿ ಮನೆ ಯಜಮಾನಿಯರ ಖಾತೆಗೆ ತಲಾ ಎರಡು ಸಾವಿರ ಜಮೆ ಆಗಿದೆ. ಇಷ್ಟು ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.
ರಾಹುಲ್ ಗಾಂಧಿ ಮಾರ್ಗದರ್ಶನದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಮ್ಮ ಸರ್ಕಾರ ಮುನ್ನಡೆಯುತ್ತಿದೆ. ಗೃಹಜ್ಯೋತಿಯಡಿ 1.42 ಕೋಟಿ ಕುಟುಂಬಗಳಿಗೆ ಅನುಕೂಲ ಆಗಿದೆ. ಶಕ್ತಿ ಯೋಜನೆಯಡಿ 48 ಕೋಟಿ ಮಹಿಳೆಯರು 1,000 ಕೋಟಿ ರೂ. ಮೊತ್ತದಷ್ಟು ಉಚಿತ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ 1.20 ಕೋಟಿ ಕುಟುಂಬಕ್ಕೆ ಐದು ಕೆಜಿ ಅಕ್ಕಿ ಮೊತ್ತ ಜಮೆ ಮಾಡಿದ್ದೇವೆ. ಮತ್ತೊಂದು ಗ್ಯಾರಂಟಿ ಶೀಘ್ರವೇ ಜಾರಿ ಮಾಡುತ್ತೇವೆ ಎಂದು ಹೇಳಿದರು.

Loading

Leave a Reply

Your email address will not be published. Required fields are marked *