ಆರ್.ಆರ್.ನಗರದಲ್ಲಿ ಸುಳ್ಳು ಕೇಸ್ ಗಳ ಬಗ್ಗೆ ಸಮಗ್ರ ತನಿಖೆ
ರಾಜರಾಜೇಶ್ವರಿನಗರ: ಚೌಡೇಶ್ವರಿ ಬಸ್ ನಿಲ್ದಾಣ ಮತ್ತಿಕೆರೆ ಜೆ.ಪಿ.ಪಾರ್ಕ್ ಬಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುನಾರ್ ರವರು, ಲೋಕಸಭಾ ಸದಸ್ಯರಾದ ಡಿ.ಕೆ.ಸುರೇಶ್ ರವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಕುಸುಮಾ ಹನುಮಂತರಾಯಪ್ಪರವರು, ಕಾಂಗ್ರೆಸ್ ಮುಖಂಡರಾದ ಹನುಮಂತರಾಯಪ್ಪ, ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕರಾದ ಬಿ.ಆರ್.ನಂಜುಂಡಪ್ಪರವರು ದೀಪ ಬೆಳಗಿಸಿ ಸೇರ್ಪಡೆ ಕಾರ್ಯಕ್ರಮಕ್ರಮಕ್ಕೆ ಚಾಲನೆ ನೀಡಿದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ವೇಲುನಾಯಕರ್, ಸಿದ್ದೇಗೌಡರು, ಶ್ರೀನಿವಾಸ್ ಮೂರ್ತಿ(ಜಾನಿ), ಬಿ.ಮೋಹನ್ ಕುಮಾರ್ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಸಮಾಜ ಸೇವಕರಾದ ಮಂಜುನಾಬಾಬು ರವರು ಮತ್ತು ನೂರಾರು ಬಿಜೆಪಿ ಮುಖಂಡರುಗಳಿಗೆ ಕಾಂಗ್ರೆಸ್ ಧ್ವಜ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.
*ಡಿ.ಕೆ.ಶಿವಕುಮಾರ್ ರವರು* ಮಾತನಾಡಿ ಮೊದಲೆ ಪಕ್ಷಕ್ಕೆ ಬಂದಿದ್ದರೆ ಕುಸುಮಾ ವಿಧಾನಸಭೆಯಲ್ಲಿ ಇರುತ್ತಿದ್ದರು.
1ಲಕ್ಷ ಮತದಿಂದ ಗೆಲ್ಲುತ್ತೇನೆ ಎಂದು ಹೇಳಿದ್ದ ಮುನಿರತ್ನರವರು 10ಸಾವಿರ ಮತದಿಂದ ಗೆದ್ದಿದ್ದಾರೆ.
ಶಾಸಕರಿಗೆ ಎಷ್ಟು ಗೌರವ ಕೊಡುತ್ತೇವೆ ಅಷ್ಟೆ ಗೌರವ ಕುಸುಮಾರವರಿಗೂ ನೀಡಲಾಗುತ್ತದೆ.
ಕಳೆದ ನಾಲ್ಕು ವರ್ಷದಲ್ಲಿ ಪೊಲೀಸ್ ರನ್ನು ಉಪಯೋಗಿಸಕೊಂಡು ನೂರಾರು ಕೇಸ್ ಗಳನ್ನು ಹಾಕಿದ್ದಾರೆ.
ನಾಲ್ಕು ವರ್ಷದ ಕೇಸ್ ಗಳ ಕುರಿತು ಸಮಗ್ರ ಪರಿಶೀಲನೆ ಮಾಡಿ, ಸುಳ್ಳು ಕೇಸ್ ಹಾಕಿದ ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲಾಗುವುದು.
ಸರ್ಕಾರ ಉರುಳಿಸುತ್ತೇವೆ ಎಂದು ಸಿಂಗಾಪುರದಲ್ಲಿ ಮೀಟಿಂಗ್ ಮಾಡುತ್ತಿದ್ದಾರೆ.
135ಕಾಂಗ್ರೆಸ್ ಪಕ್ಷದ ಶಾಸಕರು, 2ಪಕ್ಷೇತರ ಅಭ್ಯರ್ಥಿಗಳ ಬೆಂಬಲವಿದೆ ಒಳ್ಳೆಯ ಅಧಿಕಾರ ನೀಡುತ್ತೇವೆ.
ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕಾನೂನು ವಿರುದ್ದವಾಗಿ ನಡೆದುಕೊಂಡರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.
ಕಾಂಗ್ರೆಸ್ ಪಕ್ಷದ ಸರ್ಕಾರ ಬಂದು ಎರಡು ತಿಂಗಳಾಯಿತು ಆರ್.ಆರ್.ನಗರದಲ್ಲಿ ಜನರು ಸುಖ,ಶಾಂತಿಯಾಗಿ ಇದ್ದೀವಿ ಎಂದು ಹೇಳುತ್ತಾರೆ.
ಮಲ್ಲತ್ತಹಳ್ಳಿ ಮತ್ತು ಜೆಪಿ ಪಾರ್ಕ್ ನಲ್ಲಿ ಅವ್ಯವಹಾರ ಪರಿಶೀಲನೆ ಮಾಡಲಾಗುವುದು.
ಕಾಂಗ್ರೆಸ್ ಪಕ್ಷದ ಸರ್ಕಾರ 5ಗ್ಯಾರಂಟಿ ಯೋಜನೆಗಳು ಪ್ರತಿ ಮನೆ ತಲುಪಿದೆ, ಗೃಹಲಕ್ಷ್ಮೀ ಯೋಜನೆ ಮಹಿಳೆಯರು ಗಡಿಬಿಡಿ ಮಾಡಿಕೊಳ್ಳಬೇಡಿ ಯೋಜನೆ ಲಾಭ ಎಲ್ಲರಿಗೂ ತಲುಪುತ್ತದೆ.