ಮೊಸಳೆಗಳು ವರ್ಷಕ್ಕೆ ಕನಿಷ್ಠ 30 ರಿಂದ 60 ಮೊಟ್ಟೆ
ಇಟ್ಟು ಮರಿ ಮಾಡುತ್ತವೆ.ಮರಿಗಳ ಲಿಂಗ ನಿರ್ಧಾರವಾಗೋದು ಮೊಟ್ಟೆಯ ಪಲಿತದಿಂದಲ್ಲ.
ಮೊಟ್ಟೆಗಳನ್ನ ಮರಿಗಳಾಗಿ ಮಾಡಲು ಹೆಣ್ಣು ಮೊಸಳೆ ನದಿಯ ತಟದಲ್ಲಿ ಮಣ್ಣು ತೋಡಿ ನಿರ್ಮಿಸಿದ ಗೂಡಿನ
ಉಷ್ಣಾಂಶವನ್ನ ಆದರಿಸಿ ಮರಿಗಳ ಲಿಂಗ ನಿರ್ಧಾರವಾಗುತ್ತೆ .ಗೂಡಿನ ಉಷ್ಣಾಂಶ 30 °C ನಷ್ಟಿದ್ದರೇ ಮೊಟ್ಟೆಯೊಡೆದು ಬರುವ ಮರಿಗಳು ಹೆಣ್ಣಾಗಿರುತ್ತವೆ.ಗೂಡಿನ ಉಷ್ಣಾಂಶ 34 °C ನಷ್ಟಿದ್ದರೆ
ಮರಿಗಳು ಗಂಡಾಗಿರುತ್ತವೆ.
ಮೊಟ್ಟೆಯೊಡೆದು ಬರುವ ಎಲ್ಲ ಮರಿಗಳನ್ನ ತಾಯಿ ಮೊಸಳೆ ತನ್ನ ಬಾಯಲ್ಲಿರಿಸಿಕೊಂಡೋ ಅಥವಾ ತನ್ನ ಬೆನ್ನಿನ ಮೇಲಿರಿಸಿಕೊಂಡೋ ಜಾಗ್ರತೆಯಿಂದ ತೆಗೆದುಕೊಂಡು ಹೋಗಿ ನದಿಯಲ್ಲಿ ಪ್ರಶಸ್ತ ಮತ್ತು ಸುರಕ್ಷಿತ ಸ್ಥಳ ಆಯ್ಕೆ ಮಾಡಿಕೊಂಡು ಬಿಡುತ್ತದೆ.
ಆದರೇ ಈ ಮರಿಗಳೆಲ್ಲಾ ಬೆಳೆದು ಪ್ರಭುದ್ದಾವಸ್ಥೆಯನ್ನ ತಲುಪುವುದಿಲ್ಲ.ನದಿಗೆ ಬಿಟ್ಟ ಮರಿಮೊಸಳೆಗಳಲ್ಲಿ ನೂರರಲ್ಲಿ ಅರ್ಧದಷ್ಟು ಒಂದು ವಾರ ತಿಂಗಳಲ್ಲಿಯೇ
ಕಾಗೆ ,ಗೂಭೆ,ಹದ್ದು ,ಡೇಗೆ,ನಾಯಿ ,ನರಿ ,ಉಡ, ನದಿಯಲ್ಲಿನ ಮಾನಿಟರ್ ಹಲ್ಲಿ ಮತ್ತು ಇತರೇ ಭಕ್ಷಕ ಜೀವಿಗಳಿಗೆ ತುತ್ತಾಗುತ್ತವೆ .ಕಿಶೋರಾವಸ್ತೆ ತಲಪುವ ಮುನ್ನವೇ ಇವುಗಳ ಸಂಖ್ಯೆ ಇನ್ನೂ ಅರ್ಧಕ್ಕೆ ಇಳಿಯುತ್ತದೆ .ಪ್ರಭುದ್ದಾವಸ್ಥೆಯನ್ನ ತಲುಪುವುದು ಬೆರಳೆಣಿಕೆಯಷ್ಟು ಕೇವಲ 2 ಅಥವಾ 3 ರಷ್ಟು ಮಾತ್ರ.ಕೆಲವು ಸರ್ತಿ ಇಷ್ಟೂ ಸಹ ಪ್ರಭುದ್ದಾವಸ್ಥೆ ತಲುಪದೇ ಒಂದೇ ಒಂದು ಉಳಿಯಬಹುದು ಅಥವಾ ಅದೂ ಕೂಡ ಇಲ್ಲ .
ಅಕಸ್ಮಾತ್ ತಾಯಿ ಮೊಸಳೆ ನದಿಯಲ್ಲಿ ಬಿಟ್ಟ ಎಲ್ಲ ಮರಿಮೊಸಳೆಗಳು ಪ್ರಭುದ್ದಾವಸ್ಥೆ ತಲುಪುವುದೇ ಆದರೇ ಭೂಮಿಯ ಮೇಲೆ ಸರಿಸೃಪಗಳಲ್ಲಿಯೇ ಅತಿಹೆಚ್ಚು ಸಂಖ್ಯೆಯ ಮೊಸಳೆಗಳೇ ಇರುತ್ತಿದ್ದವು.ಆಗ ಇವುಗಳಿಗೆ ಭೇಟೆಪ್ರಾಣಿಗಳು ಸಾಲದಾಗಿ ಆಹಾರದ ಅಭಾವ ಉಂಟಾಗುತ್ತಿತ್ತು .ಪೂರ್ತಿ ಬೆಳೆದ ಮೊಸಳೆಗೆ ಒಂದು ದಿನಕ್ಕೆ ಎರಡರಿಂದ ಮೂರು ಕೇಜಿ ಯಷ್ಟು ಮಾಂಸ ಬೇಕಾಗುತ್ತದೆ.ಒಂದು ಮೊಸಳೆಯ ಜೀವಿತಾವಧಿ ಅಂದಾಜು 70 ವರ್ಷ .
ಮೊಸಳೆಗಳು ವನ್ಯದ ಇತರೇ ಜೀವಿಗಳನ್ನ ನಿಯಂತ್ರಿಸಿದರೇ ನರಿ ಗೂಭೆ ಹದ್ದು ಮಾನಿಟರ್ ಹಲ್ಲಿಗಳು ಮೊಸಳೆಗಳ ಸಂಖ್ಯೆಯನ್ನ ನಿಯಂತ್ರಿಸುತ್ತವೆ .
ಈ ರೀತಿ ನಿಸರ್ಗ ಮೊಸಳೆಗಳ ಸಂಖ್ಯೆಯನ್ನ ತನ್ನಿಂತಾನೇ ನಿಯಂತ್ರಿಸಿಕೊಳ್ಳುತ್ತದೆ.
#ಮೃತುಂಜಯ ನಾರಾ