ಬಯಲುಸೀಮೆಯ ಜನರನ್ನು ಮತ್ತೊಮ್ಮೆ ಕತ್ತಲೆಯಲ್ಲಿಟ್ಟ ಸಿದ್ದರಾಮಯ್ಯನವರ ಬಜೆಟ್ @ 2023 ,
ಶಾಶ್ವತ ನೀರಾವರಿಯ ಪರಿಕಲ್ಪನೆಯ ಸುಳಿವಿಲ್ಲದ,
ಅನಾಹುತಕಾರಿ ಕೆಸಿ ವ್ಯಾಲಿ ಮತ್ತು ಎಚ್ಎನ್ ವ್ಯಾಲಿ ಯೋಜನೆಗಳ ತ್ಯಾಜ್ಯ ನೀರನ್ನು ಖಡ್ಡಾಯವಾಗಿ ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡುವ ಬಗ್ಗೆ ಸ್ಪಷ್ಟತೆಯಿಲ್ಲದ, ಆಳುವವರ ಪಾಲಿಗೆ ಎಟಿಎಂ ಆಗಿರುವ ಎತ್ತಿನಹೊಳೆ ಯೋಜನೆಗೆ 3000 ಕೋಟಿ ಕೊಟ್ಟಿರುವ, ದೂರದ ಮೇಕೆದಾಟನ್ನು ನೋಡುತ್ತಾ ಪಕ್ಕದ ಕೃಷ್ಣಾ ನದಿಯ ಪಾಲನ್ನು ಪಡೆಯಲಾಗದ ಸರ್ಕಾರ, ಅಳಿದುಳಿದಿರುವ ಬೆಂಗಳೂರು ನಗರದ ಕೆರೆಗಳ ಸುಂದರೀಕರಣಗೊಳಿಸಲು ದಾರಾಳವಾಗಿ 2000 ಸಾವಿರ ಕೋಟಿ ಖರ್ಚು ಮಾಡುವ ಸರ್ಕಾರ, ಗ್ರಾಮೀಣ ಜನ ಮತ್ತು ಜಾನುವಾರುಗಳ ಜೀವನಾಡಿಗಳಾಗಿರುವ ನಮ್ಮ ಕೆರೆಗಳ ದುರಸ್ತಿಗೆ ಕೇವಲ 200 ಕೋಟಿ ಮಾತ್ರ ಮೀಸಲಿಡುವ ಜಿಪುಣ ಸರ್ಕಾರ,
ನಾವು ಕುಡಿಯುತ್ತಿರುವ ಅಂತರ್ಜಲದಲ್ಲಿ ಅಪಾಯಕಾರಿ ಯುರೇನಿಯಂ ಧಾತು ಪತ್ತೆಯಾಗಿರುವ ಬಯಲುಸೀಮೆ ಪ್ರದೇಶದ ಕೆರೆ ಕುಂಟೆ ರಾಜಕಾಲುವೆಗಳ ಸಮಗ್ರ ಅಭಿವೃದ್ದಿಗಾಗಿ ವಿಶೇಷ ಪ್ಯಾಕೇಜ್ ನೀಡಲಾಗದಂತಹಾ ದೂರದೃಷ್ಠಿ ಇಲ್ಲದ ಬಜೆಟ್.